ಶಾಂತಾ ಪಿಕ್ಚರ್ಸ್ ಲಾಂಛನದಲ್ಲಿ ಎಂ.ರವಿಕುಮಾರ್(ಕಿಂಗ್ರವಿ) ನಿರ್ಮಿಸಿರುವ ‘ರಾಧಿಕನ ಗಂಡ ಚಿತ್ರದ ಶೀರ್ಷಿಕೆಯನ್ನು ‘ರಾಧಾಳ ಗಂಡ ಎಂದು ಬದಲಿಸಲಾಗಿದೆ. ಚಿತ್ರದ ಪ್ರಥಮಪ್ರತಿ ಸಿದ್ದವಾಗಿದ್ದು, ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ.
ಹಾಸ್ಯ ಹಾಗೂ ಸಾಹಸಮಯ ಈ ಚಿತ್ರದ ನಾಯಕರಾಗಿ ಕೋಮಲ್ ಅಭಿನಯಿಸಿದ್ದಾರೆ. ಐದು ಹಾಡುಗಳಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಮುರುಗನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸೆಲ್ವಂ ಅವರ ಛಾಯಾಗ್ರಹಣವಿದೆ.
ಕೆ.ಎಂ.ಪ್ರಕಾಶ್ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಕೋಮಲ್, ಪೂರ್ಣ, ಆರ್ಯ, ಪೂರ್ಣ, ಸುದರ್ಶನ್, ಕುರಿಗಳು ಪ್ರತಾಪ್ ಮುಂತಾದವರಿದ್ದಾರೆ. ಅಮ್ಮನಾಗೇಶ್ ನೃತ್ಯ ನಿರ್ದೇಶನ, ಥ್ರಿಲ್ಲರ್ಮಂಜು ಸಾಹಸ ನಿರ್ದೇಶನ ಹಾಗು ಮೋಹನ್ ಬಿ ಕೆರೆ ಕಲಾ ನಿರ್ದೇಶನ ‘ರಾಧಾಳ ಗಂಡ ಚಿತ್ರಕ್ಕಿದೆ.